Study

Kannada Brain Twisters

  •   0%
  •  0     0     0

  • ಕಲ್ಲು ತುಳಿಯುತ್ತೆ, ಮುಳ್ಳು ಮೇಯುತ್ತೆ, ನೀರು ಕಂಡ್ರೆ ನಿಲ್ಲುತ್ತೆ ನಾನ್ಯಾರು?
    ಚಪ್ಪಲಿ
  • ಅಂಗಡಿಯಿಂದ ತರೋದು ಮುಂದಿಟ್ಟುಕೊಂಡು ಅಳೋದು. ಇದು ಏನು?
    ಈರುಳ್ಳಿ
  • ಕಿರೀಟವುಂಟು ರಾಜನಲ್ಲ , ಗಡ್ಡವುಂಟು ತುರುಕನಲ್ಲ
    ಹುಂಜ
  • ಮೇಲೆ ಹಸಿರು , ಒಳಗೆ ಕೆಂಪು , ತಿಂದರೆ ತಂಪು
    ಕಲ್ಲಂಗಡಿ
  • ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ
    ಕಪ್ಪೆ
  • ಕಾಲಿಲ್ಲದೆ ನಡೆಯುವುದು , ಬಾಯಿಲ್ಲದೆ ನುಡಿಯುವುದು, ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು
    ನದಿ
  • ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು ಇದೇನು?
    ತಾರೆಗಳು
  • ಬಾ ಅಂದರೆ ಬರೋಲ್ಲ, ಹೋಗು ಅಂದರೆ ಹೋಗೋಲ್ಲ ನಾನ್ಯಾರು?
    ಮಳೆ
  • ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ ನಾನ್ಯಾರು?
    ಮಲ್ಲಿಗೆ
  • ಬಿಡಿಸಿದರೆ ಹೂವು, ಮಡಚಿದರೆ ಮೊಗ್ಗು ,ಇದು ಏನು?
    ಛತ್ರಿ
  • ಹಸಿರು ಕೋಟೆ, ಬಿಳಿ ಕೋಟೆ, ಕೆಂಪಿನ ಕೋಟೆ, ಈ ಕೋಟೆಯೊಳಗೆ ಕಪ್ಪು ಸಿಪಾಯಿಗಳು ನಾನ್ಯಾರು?
    ಪರಂಗಿ ಹಣ್ಣು
  • ಸುದ್ದಿ ಸೂರಪ್ಪ ದೇಶವೆಲ್ಲಾ ಸುತ್ತಾಡ್ತಾನೆ ನಾನ್ಯಾರು?
    ಪೋಸ್ಟ್ ಕಾರ್ಡ್
  • ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ
    ಕಣ್ಣು
  • ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ ನಾನ್ಯಾರು?
    ಕಣ್ಣು
  • ಕಾಂತಾಮಣಿ ಎಂಬ ಪಕ್ಷಿ, ಚಿಂತಾಮಣಿ ಎಂಬ ಕೆರೆ, ಕೆರೆಯಲ್ಲಿ ನೀರಿಲ್ದೆ ಹೋದ್ರೆ ಪಕ್ಷಿಗೆ ಮರಣ..
    ದೀಪ
  • ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು?
    ಮೊಟ್ಟೆ
  • ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ
    ಗಡಿಯಾರ
  • ಹುಲಿಯ ಚಿಕ್ಕಮ್ಮ, ಇಲಿಯ ಮುಕ್ಕಮ್ಮ ನಾನ್ಯಾರು?
    ಬೆಕ್ಕು
  • ನೋಡಿದರೆ ಕಲ್ಲು, ನೀರು ಹಾಕಿದರೆ ಮಣ್ಣು ನಾನ್ಯಾರು?
    ಸುಣ್ಣ
  • ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು?
    ರೈಲು
  • ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ , ಮುಚ್ಚಿದರೆ ಹಾನಿ ಇದೇನು?
    ಮೂಗು, ಬಾಯಿ
  • ಚಿಕ್ಕ ಚಿಕ್ಕ ಪೆಟ್ಟಿಗೆ , ಚಿನ್ನದ ಪೆಟ್ಟಿಗೆ , ಮುಚ್ಚಿ ತೆಗೆದರೆ ಮುನ್ನೂರು ಪೆಟ್ಟಿಗೆ
    ದಾಳಿಂಬೆ ಹಣ್ಣು
  • ಚೆಲ್ಲೋದುಂಟು , ಕುಯ್ಯೋದುಂಟು , ತಿನ್ನೋದಿಲ್ಲ
    ಕೂದಲು
  • ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ ನಾನ್ಯಾರು?
    ಬಾಳೆಹಣ್ಣು