Edit Game
೩ ನೇ ತರಗತಿ
 Delete

Use commas to add multiple tags

 Private  Unlisted  Public



 Save

Delimiter between question and answer:

Tips:

  • No column headers.
  • Each line maps to a question.
  • If the delimiter is used in a question, the question should be surrounded by double quotes: "My, question","My, answer"
  • The first answer in the multiple choice question must be the correct answer.






 Save   33  Close
ಹೊಯ್ಸಳರಿಂದ ನಿರ್ಮಾಣಗೊಂಡ ದೇವಾಲಯಗಳಾವುವು?
ಬೇಲೂರು, ಹಳೇಬೀಡು, ಸೋಮನಾಥಪುರದಲ್ಲಿನ ದೇವಾಲಯಗಳು ಹೊಯ್ಸಳರಿಂದ ನಿರ್ಮಾಣಗೊಂಡ ದೇವಾಲಯಗಳಾಗಿವೆ.
ಗವಾಯಿಯವರು ಯಾರ ಬಾಳಿನ ಚಂದಿರ?
ಗವಾಯಿಯವರು ಅಂಧರ ಬಾಳಿನ ಚಂದಿರ
ಸೂಚನೆಗಳನ್ನು ಒಳಗೊಂಡ ಫಲಕಗಳನ್ನು __________ ಎಂದು ಕರೆಯುತ್ತಾರೆ.
ಸೂಚನಾ ಫಲಕಗಳು
ಸಿಂಹವು ಅಡವಿಯಲಿರುವ _______________ ಕರೆಯಿಸಿತು.
ವೈದ್ಯರನ್ನು
ರಸ್ತೆಯ ಬದಿಯಲ್ಲಿ ದೊಡ್ಡ ದೊಡ್ಡ ಮರಗಳಿವೆ. ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದವನ್ನು ಗುರುತಿಸಿ.
ದೊಡ್ಡ ದೊಡ್ಡ
ವಿದ್ಯಾರ್ಥಿಗಳು ಓದಿದ ನಂತರ ಬರೆದು ಬರೆದು ಅಭ್ಯಾಸ ಮಾಡಬೇಕು. ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದವನ್ನು ಗುರುತಿಸಿ.
ಬರೆದು ಬರೆದು
ಮೋಡ + ಅನ್ನು ________________ಈ ಪದಗಳನ್ನು ಕೂಡಿಸಿ ಬರೆದಾಗ
ಮೋಡವನ್ನು
ಮನೆ + ಒಳಗೆ = ______________ ಈ ಪದಗಳನ್ನು ಕೂಡಿಸಿ ಬರೆದಾಗ
ಮನೆಯೊಳಗೆ
ಕೆಲಸ + ಅನ್ನು = ______________ ಈ ಪದಗಳನ್ನು ಕೂಡಿಸಿ ಬರೆದಾಗ
ಕೆಲಸವನ್ನು
ಕನಸು ಈ ಪದದ ಪ್ರಾಸ ಪದ
ಮನಸು
ಭಾರ ಈ ಪದದ ಪ್ರಾಸ ಪದ
ವಾರ
ಬಾಲಕ ಈ ಪದದ ಅನ್ಯಲಿಂಗ ರೂಪ____________
ಬಾಲಕಿ
ಹುಡುಗಿಯರು ಈ ಪದದ ಏಕವಚನ ರೂಪ ___________
ಹುಡುಗಿ
ಮಣಿಸು ಈ ಪದದ ಅರ್ಥ ಏನು?
ಸೋಲಿಸು
ಸ್ವಪ್ನ ಈ ಪದದ ಅರ್ಥ _____________
ಕನಸು
ರಾಜ ಪಾಠಪುಸ್ತಕ ತೆಗೆದು ಏನು ಮಾಡಬೇಕು?
ರಾಜ ಪಾಠಪುಸ್ತಕ ತೆಗೆದು ಅಭ್ಯಾಸ ಮಾಡಬೇಕು.
"ಗಂಗೆಯನ್ನು ನಾನು ಶಿರದಲ್ಲಿ ಧರಿಸುತ್ತೇನೆ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಈ ಮೇಲಿನ ವಾಕ್ಯವನ್ನು ಭಗೀರಥ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ ಈ ಮಾತನ್ನು ಶಿವ ಭಗೀರಥನಿಗೆ ಕೇಳಿದನು.
ಮಕ್ಕಳೇ ನಡೆಯುವಾಗ ಪಾದಾಚಾರಿಗಳ ರಸ್ತೆಯಲ್ಲಿಯೇ ನಡೆಯಿರಿ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಈ ವಾಕ್ಯವನ್ನು ಮೃಗಾಲಯದಲ್ಲಿ ಒಂದು ದಿನ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಶಿಕ್ಷಕರು ಮಕ್ಕಳಿಗೆ ಹೇಳಿದರು.
ಗಂಗೆ ಹರಿಯುವ ರಭಸವನ್ನು ತಡೆದವರು ಯಾರು?
ಗಂಗೆ ಹರಿಯುವ ರಭಸವನ್ನು ತಡೆದವರು ಶಿವ
ಬರೆದರು ನಾಟಕ ಪುರಾಣ ಚರಿತೆ ಅಳೆಯಲಿಕ್ಕಾಗದು ______________
ಪಾಂಡಿತ್ಯ
ಗವಾಯಿಯವರು ಏನನ್ನು ಕಟ್ಟಿ ಬೆಳೆಸಿದರು?
ಗವಾಯಿಯವರು ಸ್ವರಲೋಕವನ್ನು ಕಟ್ಟಿ ಬೆಳೆಸಿದರು
" ಈ ವೀರನನ್ನು ನೀವು ನಿಮ್ಮ ದೊರೆಯನ್ನಾಗಿ ಮಾಡಿಕೊಳ್ಳಿ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಈ ಮೇಲಿನ ವಾಕ್ಯವನ್ನು ಹೊಯ್ಸಳ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಜೈನ ಗುರುಗಳು ಊರಿನ ಜನರಿಗೆ ಹೇಳಿದರು.
ಸಳನಿಗೆ ಹೊಯ್ಸಳ ಎಂದು ಯಾರು ಹೇಳಿದರು?
ಸಳನಿಗೆ ಹೊಯ್ಸಳ ಎಂದು ಜೈನ ಗುರುಗಳು ಹೇಳಿದರು.
ಶಾಲೆಗೆ ಯಾವ ದಿನ ರಜಾ ಇದೆ?
ಶಾಲೆಗೆ ಭಾನುವಾರದ ದಿನ ರಜಾ ಇದೆ.
ಋಷಿಗಳು ಭಗೀರಥನಿಗೆ ಏನೆಂದು ಹೇಳಿದನು?
ಋಷಿಗಳು ಭಗೀರಥನಿಗೆ ದೇವಲೋಕದ ಗಂಗೆಯನ್ನು ಭೂಮಿಗೆ ತಂದು ತಾತಂದಿರ ಬೂದಿಯ ಮೇಲೆ ಹರಿಸಬೇಕೆಂದು ಹೇಳಿದರು.
ಜಾಣ ವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು?
ಜಾಣ ವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಶೀತದಿ ಮೂಗು ಕಟ್ಟಿದೆ ಒಡೆಯ ವಾಸನೆ ಏನು ತಿಳಿಯದು ನಿನಗೆ ಎಂದು ಹೇಳಿತು.
ಒಳಗೆ ಈ ಪದದ ವಿರುದ್ಧ ಪದ___________
ಹೊರಗೆ
ಜಾಗರೂಕ ಈ ಪದದ ವಿರುದ್ಧ ಪದ___________
ಅಜಾಗರೂಕ
ಭಿತ್ತಿ ಪತ್ರದ ಕುರಿತು ಬರೆಯಿರಿ.
ಭಿತ್ತಿ ಅಂದರೆ ಗೋಡೆ ಗೋಡೆಗೆ ಅಂಟಿಸುವ ಪತ್ರಗಳೇ ಭಿತ್ತಿ ಪತ್ರಗಳು , ಅವು ದೊಡ್ಡದಾಗಿದ್ದು ಸಂದೇಶವನ್ನು ಸ್ಪಷ್ಟವಾಗಿ ಹಾಗೂ ಆಕರ್ಷಕವಾಗಿ ನಮಗೆ ತಿಳಿಸುತ್ತವೆ . ಅಲ್ಲದೇ ಕೆಲವೊಂದು ಭಿತ್ತಿಪತ್ರ
ಪರಿಮಳ ಈ ಪದದ ಅರ್ಥ
ಸುವಾಸನೆ
’ಅನಾರೋಗ್ಯದ ಸಿಂಹ’ ಪದ್ಯದ ನೀತಿ ಏನು?
ಅನಾರೋಗ್ಯದ ಸಿಂಹ’ ಪದ್ಯದ ನೀತಿ "ಉಪಾಯ ಬಲ್ಲವನಿಗೆ ಅಪಾಯವಿಲ್ಲ"
ಮಗು ಈ ಪದದ ಬಹುವಚನ ರೂಪ _____________
ಮಕ್ಕಳು
ಅಂಗಡಿ ಎಂಬ ಹಳ್ಳಿ ಎಲ್ಲಿದೆ?
ಅಂಗಡಿ ಎಂಬ ಹಲ್ಲಿ ಮೂಡಿಗೆರೆ ತಾಲೂಕಿನಲ್ಲಿದೆ.