Study

ಪುನರಾವರ್ತನೆ

  •   0%
  •  0     0     0

  • ಐಶ್ವರ್ಯ ____________ ಕೇಳಿದಳು.
    ಕ್ಷಮೆ
  • ಕಾಡಿಗೆ ಮರ ಕಡಿಯಲು ಬಂದವರು ಯಾರು?
    ಕಾಡಿಗೆ ಮರ ಕಡಿಯಲು ಬಂದವರು ಮಾನವ
  • ಉಳಿವು ಪದದ ವಿರುದ್ಧ ಪದ
    ಅಳಿವು
  • ಮುಖ್ಯ ಗುರುಗಳು ಯಾರ ಸಭೆ ಕರೆದರು?
    ಮುಖ್ಯ ಗುರುಗಳು ಶಾಲಾ ವಿದ್ಯಾರ್ಥಿ ಮಂತ್ರಿ ಮಂಡಲದ ಕರೆದರು
  • ಮಾನವ ಮೊಲವನ್ನು ___________________ ಪ್ರಾಣಿ ಹೇಳಿದನು..
    ಅಂಜುಬುರುಕ
  • ಮಗು ಏನನ್ನು ತಂದು ನಿಲ್ಲಿಸೆಂದು ಕೇಳುತ್ತದೆ?
    ಮಗು ಸಂಜೆಯ ಚಂದ್ರನನ್ನು ತಂದು ನಿಲ್ಲಿಸೆಂದು ಕೇಳುತ್ತದೆ?
  • ಅಳುವ ಕಂದನ ಕಣ್ಣೋಟ ಹೇಗಿರುತ್ತದೆ?
    ಅಳುವ ಕಂದನ ಕಣ್ಣೋಟ ಶಿವನ ಕೈಯಲ್ಲಿನ ಕತ್ತಿಯ ಅಂಚಿನ ಹಾಗೆ ಹೊಳೆಯುತ್ತಿರುತ್ತದೆ.
  • ತಾಯಿಯು ಕಂದನ ಅಂಗಾಲನ್ನು ಯಾವುದರಿಂದ ತೊಳೆಯುವುದಾಗಿ ಹೇಳುತ್ತಾಳೆ?
    ತಾಯಿಯು ಕಂದನ ಅಂಗಾಲನ್ನು ತೆಂಗಿನ ಕಾಯಿ ತಿಳಿನೀರಿನಿಂದ ತೊಳೆಯುವುದಾಗಿ ಹೇಳುತ್ತಾಳೆ
  • ಜಾರಿತು ನೀರಿಗೆ _________________
    ತುತ್ತೂರಿ
  • ಕಟ್ಟಿಗೆ + ಇಂದ ಕೂಡಿಸಿ ಬರೆದಾಗ
    ಕಟ್ಟಿಗೆಯಿಂದ
  • ಮಗು ಈ ಪದದ ಬಹುವಚನ ರೂಪ______________
    ಮಕ್ಕಳು
  • ’ಉದ್ಯಾನವನ’ ಪದದಲ್ಲಿರುವ ಸ್ವರಾಕ್ಷರ
  • ಅಕ್ಕ ಪದದ ಪ್ರಾಸ ಪದ
    ರೊಕ್ಕ
  • "ಸಾಲು ಮರದ ತಿಮ್ಮಕ್ಕನನ್ನು ನೋಡಿ ಕಲಿ" ಯಾರು ಯಾರಿಗೆ ಹೇಳಿದರು?
    ಈ ಮೇಲಿನ ವಾಕ್ಯವನ್ನು ’ನನ್ನ ಕನಸು ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಮರ ಮಾನವನಿಗೆ ಹೇಳಿತು.
  • ನಾನು ಈ ಪದದ ಬಹುವಚನ ರೂಪ
    ನಾವು
  • ತುತ್ತೂರಿ ಪದ್ಯವನ್ನು ಬರೆದ ಕವಿ ಯಾರು?
    ತುತ್ತೂರಿ ಪದ್ಯವನ್ನು ಬರೆದ ಕವಿ ಜಿ. ಪಿ ರಾಜರತ್ನಂ
  • ರಾಜು ಕಂಡ ಕನಸೇನು?
    ರಾಜು ಪ್ರಾಣಿಗಳೆಲ್ಲಾ ಸೇರಿ ಮರ ಕಡಿಯಲು ಬಂದ ಮಾನವನ ಮನಃ ಪರಿವರ್ತನೆ ಮಾಡಿದ ಕನಸನ್ನು ಕಂಡನು.
  • ಮಂತ್ರಿಮಂಡಲದ ಸಭೆಯಲ್ಲಿ ಯಾವುದರ ಬಗ್ಗೆ ಚರ್ಚಿಸಿದರು?
    ಮಂತ್ರಿಮಂಡಲದ ಸಭೆಯಲ್ಲಿ ಆಗಸ್ಟ್ ತಿಂಗಳಲ್ಲಿ ಬರುವ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಲೆಯಲ್ಲಿ ಆಚರಿಸುವುದರ ಕುರಿತು ಚರ್ಚಿಸಿದರು.
  • ತಾಯಿ ಪದದ ಸಮಾನಾರ್ಥಕ ಪದ
    ಮಾತೆ, ಜನನಿ, ಮಾತೃ, ಜನನಿ
  • ಚಿಕ್ಕ ಚಿಕ್ಕ ಇದು ______________
    ದ್ವಿರುಕ್ತಿ
  • ತಳಿರು ಪದದ ಜೋಡಿ ಪದ
    ತೋರಣ
  • "ನಾವು ಪ್ರಾಣಿಗಳಿಂದ ಕಲಿಯೋದು ಬಹಳಷ್ಟಿದೆ"
    ಈ ಮೇಲಿನ ವಾಕ್ಯವನ್ನು ನನ್ನ ಕನಸು ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ರಾಜುವಿನ ತಾಯಿ ರಾಜುವಿಗೆ ಹೇಳಿದರು.
  • ಹವಳ ಎಂದರೆ ಒಂದು ಜಾತಿಯ _____________ ಕೆಂಪು ಬಣ್ಣದ ಮಣಿ.
  • "ಒಳ್ಳೆಯದು ಮೇರಿಯ ಸಲಹೆ ಎಲ್ಲರಿಗೂ ಒಪ್ಪಿಗೆಯೇ" ಯಾರು ಯಾರಿಗೆ ಹೇಳಿದರು?
    ಈ ಮೇಲಿನ ವಾಕ್ಯವನ್ನು ಸ್ವಾತಂತ್ರ್ಯ ದಿನಾಚರಣೆ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಮುಖ್ಯಗುರುಗಳು ಮಕ್ಕಳಿಗೆ ಕೇಳಿದರು
  • ಚಿತ್ತಾರ ಪದದ ಅರ್ಥ
    ಚಿತ್ರ